*ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಾಣ*
*ಪ್ರತಾಪ್ ಸಿಂಹ* *ಪ್ರಭಾವ ಬೀರಿರುವ ಸಾಧ್ಯತೆ*!!!!!
*ಶಂಕೆ ವ್ಯಕ್ತಪಡಿಸಿದ ತೆನ್ನಿರ ಮೈನಾ*

ಮಡಿಕೇರಿ ನಗರದ  ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ( ಕೆ.ಎಸ್.ಆರ್.ಟಿ.ಸಿ ಡಿಪೋ ಮುಂಭಾಗ) ಬಳಿ ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ  ಮಾಜಿ ಸಂಸದ ಪ್ರತಾಪ್ ಸಿಂಹರವರು ಪ್ರಭಾವ ಬೀರಿರುವ ಶಂಕೆ ಇದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ರವರು ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು ಅವರ ಮೇಲೆ ಪ್ರಭಾವ ಬೀರಲು ಕೇಂದ್ರದ ಮಂತ್ರಿಗಳು ಮತ್ತು ಸಂಸದರಿಂದ ಮಾತ್ರ ಸಾಧ್ಯ.ಹಾಗಾಗಿ ಪ್ರತಾಪ್ ಸಿಂಹ ರವರು ಪ್ರಭಾವ ನಡೆದಿರುವ ಸಂಶಯ ಕಾಣಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮಡಿಕೇರಿಯ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ಯಲ್ಲಿ ಮಾತನಾಡಿದ ತೆನ್ನಿರ ಮೈನಾ ರವರು ರಾಷ್ಟ್ರೀಯ ಹೆದ್ದಾರಿ ಬಳಿ ಬ್ಲಾಕ್ ನಂ 16 ,ಸರ್ವೆ ನಂ. 53/6 ರ ಮಾಲಿಕರಾದ ಪೊನ್ನಚೆಟ್ಟಿರ ದೇಚಮ್ಮ ಮತ್ತು ಕುಟುಂಬದವರ ನಿವೇಶನದ ಜಿ.ಪಿ.ಎ ಯನ್ನು ಕಾರ್ಯಪ್ಪನವರಿಗೆ ನೀಡಲಾಗಿತ್ತು.
ಕಾರ್ಯಪ್ಪ ನವರು ಸದರಿ ಜಾಗವನ್ನು 20 ವರ್ಷಗಳ ಕಾಲ ತಿಂಗಳಿಗೆ 10 ಸಾವಿರ ರೂಗಳಂತೆ ನೆಲಬಾಡಿಗೆ ರೂಪದಲ್ಲಿ ಮೂರನೇ ವ್ಯಕ್ತಿಗೆ ನೀಡಿರುತ್ತಾರೆ.
2023 ರ ಮೇ ತಿಂಗಳಿನಲ್ಲಿ  ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಳವಡಿಸಲಾದ ತಡೆ ರಕ್ಷಣಾ ಅಲ್ಯೂಮಿನಿಯಂ ಬೇಲಿಯನ್ನು ಅನುಮತಿ ಇಲ್ಲದೆ ತೆರವುಗೊಳಿಸಿ ಅಪಾಯಕಾರಿ ಸ್ಥಳದಲ್ಲಿ ಲೋಹದ ವಸ್ತುಗಳನ್ನು ಬಳಸಿ
ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡಿರುತ್ತಾರೆ.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿಕೊಂಡು ಅಕ್ರಮಕ್ಕೆ ಅನುಮಾಡಿದ್ದು ಇದರ ಹಿಂದೆ ಅಂದಿನ ಸಂಸದ ಪ್ರತಾಪ್ ಸಿಂಹ ರವರು ಪ್ರಭಾವ ಬೀರಿರುವ ಶಂಕೆ ಇದೆ.ನಂತರ 2023 ರ ಜೂನ್ ತಿಂಗಳಿನಲ್ಲಿ ಮಡಿಕೇರಿ ನಗರ ಸಭೆ ಮೂರು ಮಳಿಗೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ನೀಡುತ್ತಾರೆ.12 ಮಳಿಗೆಗಳನ್ನು ನಿರ್ಮಿಸಿರುತ್ತಾರೆ.
ಚೆಸ್ಕಾಂ ಇಲಾಖೆ ನಿಯಮ ಮೀರಿ ವಿದ್ಯುತ್ ಸಂಪರ್ಕ ಒದಗಿಸಿರುತ್ತಾರೆ.
ನಂತರ ಸದರಿ ಮಳಿಗೆಯನ್ನು 2 ಲಕ್ಷದ 60 ಸಾವಿರ ರೂಗಳ ಮಾಸಿಕ ಬಾಡಿಗೆಗೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಮಹಮದ್ ರಫೀಕ್ .ಸಿ.ಹೆಚ್. ಎಂಬ ವ್ಯಕ್ತಿಗೆ ಮಡಿಕೇರಿ ನಗರ ಸಭೆಯ ಸದಸ್ಯರು,ಬಿಜೆಪಿ ಮಡಿಕೇರಿ ಮಂಡಲದ ಅಧ್ಯಕ್ಷರು ಆದ ಪಿ.ಬಿ.ಸುಬ್ರಮಣಿ (ಉಮೇಶ್ ಸುಬ್ರಮಣಿ) ರವರ ಉಸ್ತುವಾರಿಯಲ್ಲಿ ದಿನಾಂಕ 14-6-2023 ರಂದು ಅಗ್ರಿಮೆಂಟ್ ಮಾಡಿ ಕೊಡಲಾಗಿತ್ತು  ಎಂದು ತೆನ್ನಿರ ಮೈನಾ ದಾಖಲೆಗಳನ್ನು ಪ್ರದರ್ಶನ ಮಾಡಿ ವಿವರಿಸಿದರು.
ಸರ್ಕಾರಕ್ಕೆ ಸವಿಸ್ತಾರವಾಗಿ ದೂರು ಸಲ್ಲಿಸಿ ಇದರ ಬಗ್ಗೆ ಉನ್ನತ ತನಿಖೆಗೆ ಕೋರಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು.

*ರಾಜಕೀಯಕ್ಕೆ ಬಿಜೆಪಿಗರಿಗೆ ಹಿಂದುತ್ವ*
*ಅಡ್ಡ ವ್ಯವಹಾರಕ್ಕೆ ಮುಸ್ಲಿಂ ತತ್ವ*

ದೇಶದಲ್ಲಿ ಎಲ್ಲಿಯೋ ಪ್ರಕರಣ ನಡೆದರೆ ಹಿಂದುಗಳಿಗೆ ಅನ್ಯಾಯ ನಡೆದಿದೆ ಎಂದು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗಲಭೆಗೆ ಪ್ರಚೋದನೆ ನೀಡುವ ಬಿಜೆಪಿಗರು ಈಗ ತಮ್ಮದೇ ಪಕ್ಷದ ಮುಖಂಡ,ಮಂಡಲ ಅಧ್ಯಕ್ಷ ಕೇರಳದ ಮುಸ್ಲಿಂ ವ್ಯಕ್ತಿಯೊಡನೆ ಸೇರಿ ಕಾನೂನು ಬಾಹಿರ ವ್ಯವಹಾರ ನಡೆಸುತ್ತಿರುವುದು ಯಾವ ನೈತಿಕತೆ ಎಂದು ಪ್ರಶ್ನಿಸಿದ ತೆನ್ನಿರ ಮೈನಾ ರವರು ರಾಜಕೀಯಕ್ಕೆ ಹಿಂದುತ್ವ,
ವ್ಯವಹಾರಕ್ಕೆ ಮುಸ್ಲಿಂ ತತ್ವ ಕೊಡಗಿನ ಬಿಜೆಪಿ ಗರ ಅಜೆಂಡಾ ಆಗಿದೆ ಎಂದು ಟೀಕಿಸಿದರು.
ವರ್ಷದ ಹಿಂದೆ ಇದೇ ರೀತಿಯ ಲೋಹದ ಶೆಡ್ ಒಂದು ಮೆಡಿಕಲ್ ಕಾಲೇಜ್ ಸಮೀಪ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಭಸ್ಮವಾಗಿದ್ದು ಅದೇ ರೀತಿಯಲ್ಲಿ ಈ ಅನಧಿಕೃತ ವಾಣಿಜ್ಯ ಸಂಕೀರ್ಣದಲ್ಲಿ ನಡೆದು ನೂರಾರು ಪ್ರಾಣ ಹಾನಿ ಆದರೆ ಕಾಂಗ್ರೆಸ್ ಸರ್ಕಾರ ಕೇರಳದ ಮುಸಲ್ಮಾನನ ಜೊತೆ ಸೇರಿ ನರಮೇಧ ನಡೆಸಿದ್ದಾರೆ.
ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್,ಡಾ ಮಂತರ್ ಗೌಡ,
ಎ.ಎಸ್.ಪೊನ್ನಣ್ಣ ಮತ್ತು ಕಾಂಗ್ರೆಸ್ ನವರು ಇದಕ್ಕೆ ಕಾರಣ.
ರಾಜೀನಾಮೆ ಕೊಡಿ ಎಂದು ಪ್ರತಿಭಟನೆ ಮಾಡುತ್ತಾರೆ ಎಂದು ತೆನ್ನಿರ ಮೈನಾ ವ್ಯಂಗ್ಯ ವಾಡಿದರು.

More From Author

ಬೆಳೆಹಾನಿ ಸಮೀಕ್ಷೆ ನಿಖರ ಮಾಹಿತಿ ಒದಗಿಸಿ: ಎನ್.ಎಸ್.ಭೋಸರಾಜು 

ಬೆಂಗಳೂರು: ಹೈಕೋರ್ಟ್<br>ಯಾವುದೇ ಶಾಸಕಾಂಗ ಒಪ್ಪಿಗೆಯಿಲ್ಲ, ರೆರಾದ ರೆಟ್ರೋ ವಿಳಂಬ ಶುಲ್ಕವನ್ನು HC ಸ್ಟ್ರೈಕ್ ಮಾಡಿದೆ