
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನೂತನವಾಗಿ ಹೊಟೇಲೊಂದು ಪ್ರಾರಂಭಗೊಂಡಿದ್ದು ಆ ಹೋಟೆಲಿಗೆ ತೆರಳುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಲ್ಯೂಮಿನಿಯಂ ತಡೆಪಟ್ಟಿ ಅಳವಡಿಸಿದ್ದು ಅದನ್ನು ಕತ್ತರಿಸಿ ಹೋಟೆಲಿಗೆ ತೆರಳಲು ಸುಗಮ ಮಾರ್ಗ ಮಾಡಲಾಗಿದೆ.
ಈ ಭಾಗದಲ್ಲಿ ಹತ್ತಾರು ಮನೆಗಳಿದ್ದು ಒಂದು ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ವಾಹನಗಳು ಈ ಮನೆಗಳ ಬಳಿ ಬೀಳುವ ಸಂಭವವಿದೆ .ಅಷ್ಟೇ ಮಾತ್ರವಲ್ಲ ಈ ಹೋಟೆಲ್ ಮಾಲೀಕರು ಕೆದಕಲ್ ಗ್ರಾಮ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ ಎಂಬುದರ ಬಗ್ಗೆ ಬಲ್ಲಮೂಲಗಳಿಂದ ದೃಢಪಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ತಡೆಪಟ್ಟಿಯನ್ನು ಪ್ರಾಧಿಕಾರದ ಅನುಮತಿ ಇಲ್ಲದೆ ಕತ್ತರಿಸುವುದಕ್ಕೆ ಅವಕಾಶ ಇರುವುದಿಲ್ಲ. ಆದರೂ ಸಹ ಅದನ್ನು ಕತ್ತರಿಸಿ ಹೊಟೇಲ್ ಗೆ ತೆರಳಲು ಮಾರ್ಗ ಕಲ್ಪಿಸಿರುವುದು ಎಲ್ಲೋ ಒಂದು ಕಡೆ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಶಾಮೀಲಾಗಿರಬಹುದು ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕ ಸುಂಟಿಕೊಪ್ಪ ಹೋಬಳಿ ಘಟಜ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ
