*ಮಡಿಕೇರಿಯಲ್ಲಿ ಪ್ರವಾಸಿಗರ ಮೇಲೆ ಮಾರಣಾಂತಿಕ ಹಲ್ಲೆ*……..

ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕೆ.ನಿಡುಗಣೆ  ಗ್ರಾಮ ಪಂಚಾಯತ್ ಬಳಿಯ ನಂದಿಮೊಟ್ಟೆಯಲ್ಲಿ ಜೀಪ್ ಮಾಲಿಕ ಒಬ್ಬ ಪ್ರವಾಸಿಗರ ಮೇಲೆ‌ ಮಾರಣಾಂತಿಕ ಹಲ್ಲೆ‌ಮಾಡಿರುವ ಸುದ್ದಿ ವರದಿಯಾಗಿದೆ.

ನಿನ್ನೆಯ ದಿನ ಮಾಂದಲಪಟ್ಟಿಗೆ ಭೇಟಿ ನೀಡಲು ಚೆನ್ನೈ ಮೂಲದ ಕುಟುಂಬ  ತಮ್ಮ ವಾಹನದಲ್ಲಿ ನಂದಿ ಮೊಟ್ಟೆ ಜೀಪ್ ಸ್ಟಾಂಡ್ ಗೆ ಬಂದಿದೆ.ಬಾಡಿಗೆಯ ಬಗ್ಗೆ ಜೀಪ್ ಚಾಲಕನ ಬಳಿ ಮಾತನಾಡುತ್ತಿದ್ದಾಗ ಜೀಪ್ ಚಾಲಕ  ಮಹಿಳೆ ಸೇರಿದಂತೆ ಅವರ ಕುಟುಂಬದ ಸದಸ್ಯರಿಗೆ ಮನಬಂದಂತೆ ಚಚ್ಚಿದ್ದಾನೆ.ತೀವ್ರ ಹಲ್ಲೆಗೊಳಗಾದ ಜಯಂತಿ ಮತ್ತು ಅವರ ಕುಟುಂಬದವರು ಚಿಕಿತ್ಸೆ ಪಡೆಯುತ್ತಿದ್ದು  ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲು ಪುಕಾರು ನೀಡಿದ್ದಾರೆ.

More From Author

ಹಿಂದೂ ಮಹಾಸಭಾ ಗಣಪನ ಮೆರವಣಿಗೆಗೆ ವೈಭವದ ಚಾಲನೆ<br>***************************

ಕಾಂಗ್ರೆಸ್ ಶಾಸಕನ ಮೇಲೆ ಇಡಿ ದಾಳಿಯಲ್ಲಿ 24 ಕೋಟಿ ರೂ. ಒಟ್ಟು ವಶ ಈಗ 100 ಕೋಟಿ ರೂ