

ದಿನಾಂಕ 6-09-2025 ಅಂದರೆ ಇಂದು ಶನಿವಾರ ಅನಂತಪದ್ಮನಾಭ ವ್ರತ ದಿನದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ರಾಜಭೀದಿ ಉತ್ಸವವು ನೆರವಿರಲಿದ್ದು ನಗರದಾದ್ಯಂತ ಹಬ್ಬದ ವಾತಾವರಣವೇ ಸೃಷ್ಟಿ ಆಗಿರುತ್ತದೆ ಯುವಕರು ಹಿರಿಯರು ಮಕ್ಕಳು ಮಹಿಳೆಯರು ಎಲ್ಲರೂ ಸಂಪೂರ್ಣ ಮೆರವಣಿಗೆಯಲ್ಲಿ ಸಂಭ್ರಮದಿಂದ ಭಾಗಿಯಾಗಿರುತ್ತಾರೆ ಅನೇಕ ಸಂಘ ಸಂಸ್ಥೆಗಳು ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಸಾದದ ವ್ಯವಸ್ಥೆಯನ್ನು ಮಜ್ಜಿಗೆಯ ವ್ಯವಸ್ಥೆಯನ್ನು ಹಾಗೂ ಅನೇಕರು ಬೃಹದಾಕಾರದ ಹೂವಿನ ಹಾರಗಳನ್ನು ತಮ್ಮದೇ ಶೈಲಿಯಲ್ಲಿ ಅನೇಕ ಬಗೆ ಬಗೆಯ ರೀತಿಗಳಲ್ಲಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಾರೆ ಈ ಸಂದರ್ಭದಲ್ಲಿ ಸಂಪೂರ್ಣ ಶಿವಮೊಗ್ಗ ನಗರವೇ ಹಬ್ಬದಂತಿದ್ದು ಎಲ್ಲರಲ್ಲೂ ಸಂಭ್ರಮವು ಮನೆ ಮಾಡಿರುತ್ತದೆ ನಾವುಗಳು ಸಹ ಪ್ರತಿ ವರ್ಷ ನಮ್ಮ ಸ್ನೇಹಿತರು ಸಂಗಡಿಗರು, ಕಾಂಗ್ರೆಸ್ ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರೊಂದಿಗೆ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗುತ್ತಾ ಬಂದಿದ್ದು ಅನೇಕ ರೀತಿಯ ಸೇವೆಗಳನ್ನು ಸಲ್ಲಿಸಿರುತ್ತೇವೆ, ಅದರಂತೆ ಕಳೆದ ಬಾರಿ ಅಂದರೆ 2023 ರ ಸಂದರ್ಭದಲ್ಲಿ ಬೃಹದಾಕಾರದ ಒಣಕೊಬ್ಬರಿ ಹಾರವನ್ನು ಸರ್ವ ಸಿದ್ದಿ ವಿನಾಯಕನಿಗೆ ಅರ್ಪಿಸಿದ್ದೆವು ಹಾಗೂ 2024ರ ಸಂದರ್ಭದಲ್ಲಿ ಹೊಸ ನೋಟುಗಳ ಹಾರವನ್ನು ಸಹ ಗಣಪನಿಗೆ ಅರ್ಪಿಸಿದೆವು ಅದೇ ರೀತಿ ಈ ಬಾರಿಯೂ ಸಹ ವಿಶೇಷವಾಗಿ ಪ್ರಪ್ರಥಮ ಬಾರಿಗೆ ಬೃಹದಾಕಾರದ 10 ಅಡಿ ಎತ್ತರದ ಸುಮಾರು 75 ರಿಂದ 100 ಕೆಜಿ ಡ್ರೈ ಫ್ರೂಟ್ಸ್ ( DRY FRUITS ) ಹಾರವನ್ನು ವಿನಾಯಕನಿಗೆ ಅರ್ಪಿಸಲಿದ್ದು
ಹೆಚ್ ಸಿ ಯೋಗೇಶ್ ರವರ ನಿವಾಸದಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಹಾಗೂ ಮಂಗಳವಾದ್ಯಗಳೊಂದಿಗೆ ಗಾಂಧಿಬಜಾರ್ ರಾಮಣ್ಣ ಶೆಟ್ಟಿ ಪಾರ್ಕ್ ತಲುಪಲಿದ್ದು ಕಾಂಗ್ರೆಸ್ ಪಕ್ಷದ ಎಲ್ಲಾ ಮುಚುಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಪಕ್ಷದ ಮುಖಂಡರುಗಳು, ಮಹಿಳಾ ಮುಖಂಡರುಗಳು, 2 ಬ್ಲಾಕ್ ನ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಬರಬೇಕಾಗಿ ವಿನಂತಿ.
*ಹೆಚ್ ಸಿ ಯೋಗೇಶ್
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 2023
ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು.*
