‘ತಹಸೀಲ್ದಾ‌ರ್ ನ್ಯಾಯಾಲಯದಲ್ಲಿ ವ್ಯಾಜ್ಯ 90 ದಿನದಲ್ಲಿ ಇತ್ಯರ್ಥ ಆಗದಿದ್ರೆ ಕ್ರಮ ಕಂದಾಯ ಸಚಿವರು ಕೃಷ್ಣ ಬೈರೇಗೌಡ  ಖಡಕ್ ಸೂಚನೆ.

ಬೆಂಗಳೂರು: ತಹಸೀಲ್ದಾ‌ರ್ ನ್ಯಾಯಾಲಯಗಳಲ್ಲಿನ ತಕರಾರು ಅರ್ಜಿಗಳನ್ನು 90 ದಿನಗಳೊಳಗೆ ವಿಲೇವಾರಿ ಮಾಡದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ತಹಸೀಲ್ದಾ‌ರ್ ಜತೆ ವೀಡಿಯೋಕಾನ್ನರೆನ್ಸ್‌ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಕಳೆದ ‌ ಎರಡು ವರ್ಷಗಳಿಂದ ತಹಸೀಲ್ದಾ‌ರ್ ನ್ಯಾಯಾಲಯಗಳ ಯಾಲಯಗಳ ತಕರಾರು ಅರ್ಜಿಗಳ ವಿಲೇವಾರಿ ಗಮನಾರ್ಹವಾಗಿ ಪ್ರಗತಿ ಕಂಡಿದೆ. ಈ ಹಿಂದೆ ಪ್ರಕರಣಗಳ ಇತ್ಯರ್ಥಕ್ಕೆ 212 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಅದನ್ನು 82 ದಿನಕ್ಕೆ ಇಳಿಸಲಾಗಿದೆ. ಆದರೆ, ಈಗ ತಕರಾರು ಅರ್ಜಿಗಳ ವಿಲೇ ಕೆಲಸ ‌ ವೇಗ ಕಳೆದುಕೊಳ್ಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 90 ದಿನಗಳಲ್ಲಿ ಅರ್ಜಿ ವಿಲೇ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

More From Author

‘ತಹಸೀಲ್ದಾ‌ರ್ ಕೋರಲ್ಲಿನ ವ್ಯಾಜ್ಯ 90 ದಿನದಲ್ಲಿ ಇತ್ಯರ್ಥ ಆಗದಿದ್ರೆ ಕ್ರಮ ಕಂದಾಯ ಸಚಿವರು ಕೃಷ್ಣ ಬೈರೇಗೌಡ  ಖಡಕ್ ಸೂಚನೆ.

ದೆಹಲಿಯ ಅಜಯ್ ಭವನದಲ್ಲಿ ಜಸ್ಟಿಸ್ ಸುದರ್ಶನ್ ರೆಡ್ಡಿ, ಉಪರಾಷ್ಟ್ರಪತಿ ಮೈತ್ರಿಕೂಟದ ಭಾರತ ಅಭ್ಯರ್ಥಿ *